ವಿಜ್ಞಾನ ಮಾದರಿಗಳ ವಸ್ತು ಪದರ್ಶನ ಹಾಗೂ ಮಾದರಿ ತಯಾರಿಕಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ
ದಿನಾಂಕ: 06-11-2011
ದಿನನಿತ್ಯದ ಬದುಕಿನಲ್ಲಿ ಗಣಿತ, ರಸಾಯನಶಾಸ್ತ್ರ, ಬೌತಶಾಸ್ತ್ರ ಮುಂತಾದ ವಿಜ್ಞಾನದ ವಿಶೇಷಗಳು ನಡೆಯುತ್ತಲೇ ಇರುತ್ತದೆ. ಅವನ್ನೆಲ್ಲಾ ತಿಳಿದುಕೊಳ್ಳಬೇಕು. ಸಾಮಾನ್ಯವಿಷಯಗಳಲ್ಲೂ ವಿಜ್ಞಾನದ ಮಹತ್ತರ ವಿಚಾರಗಳಿರುತ್ತವೆ ಎಂದು ತಿಳಿದಾಗ ನಮಗೆ ಸಂತೋಷ ಆಶ್ಚರ್ಯಗಳಾಗುತ್ತವೆ. ನೀವೆಲ್ಲಾ ಈ ಮಾದರಿಗಳನ್ನು ವೀಕ್ಷಿಸಿ, ಕಲಿತು ಇತರರಿಗೂ ತಿಳಿಸಿ ಎಂದು ಉದ್ಘಾಟನೆ ಮಾಡಿದ ಎಂ.ಡಿ.ಎಫ್. ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆರ್.ಎಂ.ಬಾಪಟ್. ರವರು ಹೇಳಿದರು. ಈ ಕಾರ್ಯಕ್ರಮವನ್ನು ಸಾಗರ ವಿಜ್ಞಾನ ವೇದಿಕೆ ಎರ್ಪಡಿಸಿತ್ತು.
ಅಲ್ಲಿಯೇ ಉಪಸ್ಥಿತರಿದ್ದ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾದ ಪ್ರೊ ಎಂ.ಆರ್. ನಾಗರಾಜುರವರು “ ವಿಜ್ಞಾನದ ಪ್ರಯೋಗಗಳಲ್ಲಿ ನಾಲ್ಕು ಬಗೆಗಳಿವೆ. ಶಿಕ್ಷಕರಿಗೋಸ್ಕರ ಶೈಕ್ಷಣಿಕ ಪ್ರಯೋಗಗಳು, ಸಂಶೋಧನೆಗೊಸ್ಕರ ಮಾಡುವ ಪ್ರಯೋಗಗಳು, ವಿದ್ಯಾರ್ಥಿಗೊಸ್ಕರ ಕಲಿಕೋಪಕರಣಗಳು, ಹಾಗೂ ಸಾರ್ವಜನಿಕರಿಗೋಸ್ಕರ ಕೌತುಕ ಪ್ರಯೋಗಗಳು. ಇಲ್ಲಿ ಆರ್.ಎಂ.ಬಾಪಟ್‌ರವರು ಉದ್ಘಾಟನೆ ಮಾಡಿದ್ದು ಹೈಡ್ರೊಜನ್ ಪರಾಕ್ಸೈಡ್ಗೆ ಪ್ರೇರೇಪಣೆ ನೀಡಲು ಪೊಟಾಸಿಯಂ ಅಯೊಡೈಡ್ ಸೇರಿಸಿದಾಗ, ಬೀಕರಿನಿಂದ ನೊರೆನೊರೆಯು ಹೊರಬರುತ್ತದೆ. ಅಂದರೆ ಅಲ್ಲಿ ಆಕ್ಸಿಜನ್ ಉತ್ಪತ್ತಿಯಾಗಿ ನೀರಿನ ಗುಳ್ಳೆಗಳಾಗಿ ಮೇಲೆದ್ದು ಬರುತ್ತದೆ. ಇದು ಕೌತುಕವಾಗಿ ಅಚ್ಚರಿಯನ್ನು ಮೂಡಿಸುತ್ತದೆ. ಟೂತ್‌ಪೇಸ್ಟ್ ನೊರೆಯಂತೆ ಕಂಡು ಇದನ್ನು ಅಗಾದ ನೊರೆಯನ್ನು ನೋಡಿ “ ಆನೆ ಟೂತ್‌ಪೇಸ್ಟ್ “ ಎಂದು ಮಕ್ಕಳು ಹೇಳುತ್ತಾರೆ ಎನ್ನುವ ಚಟಾಕಿಯನ್ನು ಹಾರಿಸಿದರು.
ಸಾಗರ ವಿಜ್ಞಾನ ವೇದಿಕಯ ಅಧ್ಯಕ್ಷರಾದ ಪ್ರೊ. ಎಚ್.ಎಲ್.ಎಸ್.ರಾವ್. ಕಾರ್ಯದರ್ಶಿ ಪೂರ್ಣಪ್ರಜ್ಞ ಬೇಳೂರು ಹಾಗೂ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಶನ್‌ನ ತರಬೇತುದಾರರು ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಸಾಗರ , ಸಮೂಹ ಸಂಪನ್ಮೂಲ ಕೇಂದ್ರ ಸಾಗರ ಹಾಗು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ಸಾಗರ ವಿಜ್ಞಾನ ವೇದಿಕೆ ಏರ್ಪಡಿಸಿತ್ತು. ಸಾಗರ ವಿಜ್ಞಾನ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ನಾರಯಣಸ್ವಾಮಿ ಎಂ.ಹೆಚ್. ರವರು ಸ್ವಾಗತಿಸಿದರು. ಅಧ್ಯಕ್ಷರಾದ ಪ್ರೊ ಹೆಚ್.ಎಲ್.ಎಸ್. ರಾವ್ ಪ್ರಾಸ್ತವಿಕ ವಿವರ ನೀಡಿದರು. ವೇದಿಕೆಯ ಸಹಕಾರ್ಯದರ್ಶಿಯವರಾದ ಎನ್. ರವಿಶಂಕರ್ ವಂದಿಸಿದರು.

No comments:
Post a Comment